ವೈಶಿಷ್ಟ್ಯಗಳು

TVS Jupiter Front Mirror

ಡ್ಯುಯಲ್ ಟೋನ್ ಹ್ಯಾಂಡಲ್ ಗ್ರಿಪ್ಸ್‌

ಸ್ಟೈಲಿಶ್ ಡ್ಯುಯಲ್ ಟೋನ್ ಗ್ರಿಪ್ಸ್‌

LED ಟೇಲ್ ಲ್ಯಾಂಪ್

ಆಪ್ಟಿಕಲ್ ಗೈಡ್‌ ಹೊಂದಿರುವ ಉನ್ನತ LED ಲೈಟ್ಸ್ ಯಾವಾಗಲೂ ನಿಮ್ಮೊಂದಿಗಿರುತ್ತವೆ ಮತ್ತು ಕಡಿಮೆ ಗೋಚರತೆಯಲ್ಲಿ ಕೂಡ ತಾವು ಅತ್ಯಂತ ಸ್ಪಷ್ಟವಾಗಿ ನೋಡುವ ಸೌಲಭ್ಯತೆ ನೀಡುತ್ತದೆ. ಇಷ್ಟೇ ಅಲ್ಲ, ಇದರ LED ಹೆಚ್ಚು ಮಿಂಚುವ ಮತ್ತು ಬಾಳಿಕೆಯದ್ದಾಗಿದೆ. ಇದು ಇಂಜಿನ್ ಮೇಲೆ ವಿದ್ಯುತ್ತಿನ ಭಾರ (ಇಲೆಕ್ಟ್ರಿಕಲ್ ಲೋಡ್) ಕಡಿಮೆ ಹಾಕುತ್ತದೆ ಮತ್ತು ನಿಮ್ಮ Jupiterಗೆ ಒಂದು ಅಭೇದ್ಯ ಸ್ಟೈಲ್ ಕೂಡ ಕೊಡುತ್ತದೆ.

TVS Jupiter 3D Emblem

ಪ್ರೀಮಿಯಮ್ 3 - D ಲೋಗೊ

ಸ್ಟೈಲ್ ನಲ್ಲಿ ಎಲ್ಲರಿಗಿಂತ ಮುಂದೆ ಇರಿ. TVS Jupiterನಲ್ಲಿ ಒಂದು 3D ಎಬ್ಲೆಮ್ ಇದ್ದು, ಇದು ನಿಜವಾಗಿಯೂ ಒಂದು ಪ್ರೀಮಿಯಮ್ ಟೂ-ವ್ಹೀಲರ್‌ನ ಫೀಲ್ ಕೊಡುತ್ತದೆ.

ಸ್ಟೇನಲೆಸ್ ಸ್ಟೀಲ್ ಮಫ್ಲರ್ ಗಾರ್ಡ್

Jupiter ಸ್ಟೈಲ್ ಮತ್ತು ಸುರಕ್ಷತೆಯ ಒಂದು ಅಭೇದ್ಯ ಸಂಗಮ. ಇದರಲ್ಲಿದೆ ಕನ್ನಡಿಯಂತಹ ಹೊಳೆಯುವ ಸ್ಟೇನಲೆಸ್ ಸ್ಟೀಲ್ ಮಫ್ಲರ್ ಗಾರ್ಡ್.

TVS Jupiter Black Scooty

ಆಲ್ ಬ್ಲ್ಯಾಕ್ ಥೀಮ್

ನಿಖರವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರೀತಿಯಿಂದ ರಚಿಸಲಾಗಿದೆ, Jupiterನ ಮನಮೋಹಕ ಎಕ್ಸ್‌ಟಿರಿಯರ್ ಅತ್ಯಂತ ಸಂತೃಪ್ತಿ ಕೊಡುತ್ತದೆ. ಬ್ಲ್ಯಾಕ್ ಇಂಜಿನ್‌ನೊಂದಿಗಿನ ಬ್ಲ್ಯಾಕ್ ಅಲಾಯ್ ವ್ಹೀಲ್ಸ್ ಒಂದು ವಿಶೇಷ ಆಲ್ ಬ್ಲ್ಯಾಕ್ ಥೀಮ್ ನ ಅನುಭವ ನೀಡುತ್ತದೆ. ಇದು ಕೆಲಸದ ಮನೋಲಹರಿ ಅಥವಾ ಅನನ್ಯತೆಯ ಅಭಿಲಾಷೆಗೆ ಅನುಗುಣವಾಗಿದೆ. ಇದು ಕೆಲಸದ ಮನೋಲಹರಿ ಅಥವಾ ವಿರಾಮದ ಅಭಿಲಾಷೆ - ಎರಡಕ್ಕೂ ಹೊಂದಿಕೊಳ್ಳುತ್ತದೆ,

TVS Jupiter BSVI LED Headlamp

LED ಹೆಡ್ ಲ್ಯಾಂಪ್

ಕಳಪೆ ಗೋಚರತೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಿರಿ. ಇದರ LED ಹೆಡ್ ಲ್ಯಾಂಪ್ ನಿಂದ ನಿಮ್ಮ ಸುರಕ್ಷತೆ ಅಧಿಕ. ನೀವು ಮುಂಜಾನೆ ಅಥವಾ ನಡು ರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಯಲ್ಲಿ ಗಾಡಿ ಓಡಿಸುತ್ತಿರುವಾಗ ಗೋಚರತೆಗೆ (ವಿಜಿಬಿಲಿಟಿ)ಯಾವುದೇ ತೊಂದರೆ ಇರುವುದಿಲ್ಲ.

TVS Jupiter ETFi

ETFi

ಹೊಸ BS-VI ನ ಅನುರೂಪ ತಯಾರಿಸಲಾದ ನೆಕ್ಸ್ಟ್‌-ಜೆನ್ ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ (ETFi) ಇಂಜಿನ್ 15% ಅಧಿಕ ಮೈಲೇಜ್‌ನೊಂದಿಗೆ ಉತ್ತಮ ಇಂಜಿನ್ ಪರ್ಫಾರ್ಮೆನ್ಸ್, ಉತ್ತಮ ಬಾಳಿಕೆ ಮತ್ತು ಒಳ್ಳೆಯ ರೈಡ್‌ನ ಅನುಭವ ಕೊಡುತ್ತದೆ.

TVS Jupiter ZX More Mileage

15 ಅಧಿಕ ಮೈಲೇಜ್*

ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ ಟೆಕ್ನಾಲಾಜಿಯಿಂದ ನಿಮಗೆ ಸಿಗುತ್ತದೆ 15% ಅಧಿಕ ಮೈಲೇಜ್.

TVS Jupiter Econometer

ಇಕೊನೊಮೀಟರ್®

TVS Jupiterಅನ್ನು ಒಳ್ಳೆಯ ಇಂಧನ ಉಳಿತಾಯಕ್ಕಾಗಿ ಕುಶಲತೆಯಿಂದ ಡಿಸೈನ್ ಮಾಡಲಾಗಿದೆ. ನಿಮ್ಮ ಒಂದಿಷ್ಟು ಸಹಾಯದಿಂದ, ಇದು ಇನ್ನಷ್ಟು ಉತ್ತಮವಾಗಬಹುದಾಗಿದೆ. ಇದರ ಆಧುನಿಕ ಟೆಕ್ನಾಲಾಜಿ ಶ್ರೇಣಿಯಲ್ಲೇ ಸರ್ವಶ್ರೇಷ್ಟ (ಬೆಸ್ಟ್-ಇನ್-ಸೆಗ್ಮೆಂಟ್) ಮೈಲೇಜ್ ನೀಡುವುದು. ನಿಮ್ಮ ಥ್ರಾಟಲ್‌ ಅನ್ನು ‘‘ಎಕಾನಮಿ’’ ಮೋಡ್‌ನಲ್ಲಿ ಎಡ್ಜಸ್ಟ್‌ ಮಾಡಿ ಮತ್ತು ಇನ್ನಷ್ಟು ಇಂಧನ ಉಳಿಸಿ. ‘‘POWER" & "ECO’’ ನಂತಹ ಟು-ಮೋಡ್ ರೈಡಿಂಗ್ ಆಪ್ಷನ್, Jupiter ಓಡಿಸುವ ನಿಮ್ಮ ಅನುಭವವನ್ನು ಇನ್ನಷ್ಟು ಆನಂದಮಯವನ್ನಾಗಿಸುತ್ತದೆ.

TVS Jupiter Scooty Image

ಇಂಟೆಲಿಜೆಂಟ್ ಇಗ್ನೀಶನ್ ಸಿಸ್ಟೆಮ್

TVS Jupiterನ ಉತ್ತಮ ಇಗ್ನೀಶನ್ ಟೆಕ್ನಾಲಾಜಿ ನಿರಂತರ ವಾಹನದ ಲೋಡ್ ಹಾಗೂ ಪವರ್‌ನ ಅವಶ್ಯಕತೆಯನ್ನು ತಿಳಿದುಕೊಳ್ಳುತ್ತದೆ ಮತ್ತು ಅದರ ಪ್ರತಿಕ್ರಿಯೆಯನ್ನು ಎಡ್ಜೆಸ್ಟ ಮಾಡಿಕೊಳ್ಳುತ್ತದೆ. ಇದರಿಂದ ನಿಮಗೆ ಸಿಗುತ್ತದೆ ಉತ್ತಮ ರೈಡ್ ಕ್ವಾಲಿಟಿ ಮತ್ತು ಟ್ರಾಫಿಕ್‌ನಲ್ಲಿ ಅಧಿಕ ಮೈಲೇಜ್. ಒಟ್ಟಾರೆಯಾಗಿ ಇದು ನಿಮಗೆ ಒಳ್ಳೆಯ ಇಂಧನ ಕ್ಷಮತೆ, ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಮೈಲೇಜ್ ಮತ್ತು ಹಣದ ಉಳಿತಾಯವನ್ನು ನೀಡುತ್ತದೆ.

TVS Jupiter Black Scooty Image

ಆಂಟಿ ಸ್ಕಿಡ್ ಲಾಂಗ್ ಸೀಟ್

ಸಡನ್‌ ಬ್ರೇಕ್ ಹಾಕುವಾಗ ಮತ್ತು ಇಳಿಜಾರುಗಳಲ್ಲಿ ಸವಾರಿ ಮಾಡುವಾಗ ರೈಡಿಂಗನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಮತ್ತು ಹಿಂದೆ ಕೂತವರ [ಪಿಲಿಯನ್‌ನ] ಅಧಿಕ ಅನುಕೂಲಕ್ಕಾಗಿ ಉದ್ದನೆಯ ಸೀಟ್‌

TVS Jupiter Front Telescopic suspension

ಫ್ರಂಟ್ ಎಡ್ವಾನ್ಸಡ್ ಟೆಲಿಸ್ಕೊಪಿಕ್ ಸಸ್ಪೆನ್ಶನ್

ಒಂದು ವಾಹನವನ್ನು ಅದರ ತೀವ್ರತೆ ಮತ್ತು ಅದರೊಂದಿಗೆ ಸ್ಮೂದ್ ರೈಡ್ ಆಧಾರದ ಮೇಲೆ ಅಳೆಯಲಾಗುತ್ತದೆ. TVS Jupiterನಲ್ಲಿ ಮುಂದಿನ ಭಾಗದಲ್ಲಿದೆ ಎಡ್ವಾನ್ಸ ಟೆಲಿಸ್ಕೊಪಿಕ್ ಶಾಕ್ ಆಬ್ಸರ್ಬರ್. ತಗ್ಗು ಅಥವಾ ಕೆಟ್ಟ ರಸ್ತೆಯಲ್ಲಿ ಹೋಗುತ್ತಿರುವಾಗ ಇದರ ಕುಶನಿಂಗ್ ಇಫೆಕ್ಟ್ ಉತ್ತಮ ಮತ್ತು ನಯವಾಗಿರುತ್ತದೆ.

TVS Jupiter Gas Charged Rear Suspension

ಗ್ಯಾಸ್ ಚಾರ್ಜ್ಡ್ ರಿಯರ್ ಮೊನೊ ಶಾಕ್

TVS Jupiterನಲ್ಲಿ ಹಿಂದೆ ಗ್ಯಾಸ್ ಚಾರ್ಜ್ಡ್ ಶಾಕ್ ಆಬ್ಸರ್ಬರ್ ಇವೆ. ಇವು ವಿಶೇಷವಾಗಿ ರಫ್‌ (ತಗ್ಗು ದಿನ್ನೆ) ರಸ್ತೆಯಲ್ಲಿ ಉಂಟಾಗುವ ಚಿಕ್ಕ ಪುಟ್ಟ ಜರ್ಕ್‌ಗಳನ್ನು ಕಡಿಮೆ ಮಾಡುವಂತೆ ಡಿಸೈನ್ ಮಾಡಲ್ಪಟ್ಟಿವೆ. ಗ್ಯಾಸ್‌ನಿಂದ ತುಂಬಿದ ಹಿಂದಿನ ಶಾಕ್ ಆಬ್ಸರ್ಬರ್ ನಿಮಗೆ ಮತ್ತು ನಿಮ್ಮ ಹಿಂದೆ ಕುಳಿತ ವ್ಯಕ್ತಿಗೆ ಒಂದು ಅನನ್ಯ ಸೀಟಿಂಗ್ ಕಂಫರ್ಟ ಒದಗಿಸುತ್ತದೆ ಮತ್ತು ತಗ್ಗು ದಿನ್ನೆಯ ರಸ್ತೆಯ ಮೇಲೆ ಸವಾರಿ ಮಾಡುವಾಗ ನಿಮ್ಮ ಬೆನ್ನು ಅಥವಾ ಭುಜಕ್ಕೆ ಉಂಟಾಗುವ ಕ್ಷತಿಯಿಂದ ರಕ್ಷಿಸುತ್ತದೆ.(*Base variant)

TVS Jupiter Tubless Tyre

ಎಲ್ಲಕ್ಕಿಂತ ದೊಡ್ಡ 90/ 90-12 ಟ್ಯೂಬಲೆಸ್ ಟೈಯರ್

ಇದು ನಿಮ್ಮ ಸ್ಕೂಟರ್ ಮತ್ತು ರಸ್ತೆಯ ಮಧ್ಯ ಒಂದು ವಿಶೇಷ ಸಂಬಂಧನ್ನು ಏರ್ಪಡಿಸುತ್ತದೆ. ಬಾಳಿಕೆಯ, ಸ್ಟೈಲಿಶ್ ಮತ್ತು ಭಾರದಲ್ಲಿ ಹಗುರಾದ ಆಲ್ ಅಲಾಯ್ ವ್ಹೀಲ್. ರಸ್ತೆಯ ಮೇಲೆ ಅತ್ಯುತ್ತಮ ಗ್ರಿಪ್. ಜಂಗು ತಾಗುವ ಸಮಸ್ಯೆಯೇ ಇಲ್ಲ. ಇದರ ಟ್ಯೂಬಲೆಸ್ ಟೈಯರ್ ಸಹಾಯದಿಂದ ತಾವು ದೂರದ ಸವಾರಿಯಲ್ಲಿ ಕೂಡ ಇರುವಿರಿ ಟೆನ್ಶನ್-ಫ್ರೀ.

TVS Jupiter Least Turning Radius

ಕನಿಷ್ಟ ಟರ್ನಿಂಗ್ ರೇಡಿಯಸ್

ವಾಸ್ತವವಾಗಿ ತಾವು ವೇಗದ ಮತ್ತು ತೀಕ್ಷ್ಣ ತಿರುವುಗಳನ್ನು ನಂಬಲು ಸಾಧ್ಯವಿಲ್ಲ. ಆದರೆ 1910 ಮಿಮಿ ಯ ಕನಿಷ್ಟ ಟರ್ನಿಂಗ್ ರೇಡಿಯಸ್‌ನೊಂದಿಗೆ, TVS Jupiter ಕೊಡುತ್ತದೆ ಒಳ್ಳೆಯ ಗತಿಶೀಲತೆ, ಕುಶಲತೆ ಮತ್ತು ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಸವಾರಿ.

TVS Jupiter Largest Wheel Base

ಎಲ್ಲಕ್ಕಿಂತ ದೊಡ್ಡ ವ್ಹೀಲ್ ಬೇಸ್

ವ್ಹೀಲ್ ಬೇಸ್ ದೊಡ್ಡದಾಗಿರುವುದರಿಂದ ಸ್ಥಿರತೆ ಸಿಗುತ್ತದೆ. ಒಂದು ಟ್ರಾನ್ಸವರ್ಸಲೀ ಮೌಂಟೆಡ್ ಇಂಜಿನ್ ಮತ್ತು ಎಲ್ಲಕ್ಕಿಂತ ದೊಡ್ಡ 1275 ಮಿಮಿ ಯ ವ್ಹೀಲ್ ಬೇಸ್‌ನೊಂದಿಗೆ TVS Jupiter ಭಾರತದ ಯಾವುದೇ ರಸ್ತೆ ಪರಿಸ್ಥಿತಿಗಳಲ್ಲಿ ಒಂದು ಲಕ್ಷರಿ ಸ್ಕೂಟರ್‌ನ ಎಕ್ಸ್ ಟ್ರಾ ಆರ್ಡಿನರಿ ರೈಡಿಂಗ್ ಅನುಭವ ಕೊಡುತ್ತದೆ.

TVS Jupiter ZX accessible kick start

ಎಕ್ಸೆಸಿಬಲ್ ಕಿಕ್ ಸ್ಟಾರ್ಟ್ ಮತ್ತು ಇಲೆಕ್ಟ್ರಿಕ್ ಸ್ಟಾರ್ಟ್

TVS Jupiterನಲ್ಲಿ ಇಲೆಕ್ಟ್ರಾಕ್ ಸ್ಟಾರ್ಟರ್ ಇದೆ. ತಾವು ಆರಾಮದಿಂದ ಕುಳಿತುಕೊಳ್ಳಿ ಮತ್ತು ನಿಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿ ಯಾವಾಗ ಬೇಕೆಂದಾಗ. ಇದರಲ್ಲಿ ಕಿಕ್ ಸ್ಟಾರ್ಟ್ ಕೂಡ ನಿಮ್ಮ ಕಾಲಿನ ಸಮೀಪದಲ್ಲೇ ಇದ್ದು, ನೀವು ಸೀಟ್‌ನಿಂದ ಮೇಲೇಳದೇ ಸ್ಕೂಟರ್ ಸ್ಟಾರ್ಟ್ ಮಾಡಬಹುದಾಗಿದೆ.

TVS Jupiter Largest Leg Space

ಆಧಿಕ ಲೆಗ್ ಸ್ಪೇಸ್

ಈ ಸ್ಕೂಟರ್‌ನ ಪ್ರತಿಯೊಂದು ಭಾಗವನ್ನು ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗಿದೆ, ಆದ್ದರಿಂದ ಈ ಸ್ಕೂಟರ್ ಓಡಿಸುವ ಮತ್ತು ಹಿಂದೆ ಕುಳಿತುಕೊಂಡವರ - ಇಬ್ಬರ ಪರ್ಸನ್ಯಾಲಿಟಿಯಲ್ಲಿ ಒಂದು ವೈಯ್ಯಾರವಿರುತ್ತದೆ. TVS Jupiter ಬೇರೆ ಸ್ಕೂಟರ್ ಹೋಲಿಕೆಯಲ್ಲಿ ಅತಿ ದೊಡ್ಡ ಲೆಗ್ ಸ್ಪೇಸ್ ನೀಡುತ್ತದೆ ( 375 ಮಿಮಿ). ಸವಾರಿ ಮಾಡಲು ಸುಲಭ ಮತ್ತು ಹೆಚ್ಚು ಸ್ಟೋರ್‌ ಮಾಡಲೂ ಸುಲಭ.

TVS Jupiter lock

ಆಲ್‌ ಇನ್‌ ಒನ್‌ ಲಾಕ್‌

ಒಂದೇ ಕೀ ಹೋಲ್ ನಿಂದ ಇಗ್ನಿಷನ್, ಇಂಧನ ಟ್ಯಾಂಕ್, ಹ್ಯಾಂಡಲ್ ಲಾಕ್, ಸೀಟ್ ಲಾಕ್ ಅನ್ನು ಆಪ್‌ರೇಟ್‌ ಮಾಡಲು ಸಹಾಯ ಮಾಡುತ್ತದೆ

TVS Jupiter Black Scooty Image 2

ಇಂಜಿನ್ ಕಿಲ್ ಸ್ವಿಚ್

ಅಸ್ಥಿರ ನಿಲ್ದಾಣಗಳಲ್ಲಿ ಇಂಜಿನ್ ಸ್ವಿಚ್ ಆಫ್ ಮಾಡುವುದು ಸುಲಭ

TVS Jupiter Front Image

ಮೊಬೈಲ್ ಚಾರ್ಜಿಂಗ್

ಯುಟಿಲಿಟಿ ಬಾಕ್ಸ್ ಜೊತೆಗೆ ಫ್ರಂಟ್ ಮೊಬೈಲ್ ಚಾರ್ಜರ್ ಸೌಲಭ್ಯ, ಇದು ಪ್ರಯಾಣದಲ್ಲಿ ಚಾರ್ಜಿಂಗ್‌ನ ಸೌಲಭ್ಯ ಮತ್ತು ಸುಲಭ ಆ್ಯಕ್ಸೆಸ್‌ನ ಅನುಕೂಲವನ್ನು ಒದಗಿಸುತ್ತದೆ

TVS Jupiter Black Scooty Image 3

ಮಡಚಬಹುದಾದ ಕನ್ನಡಿಗಳು

ಮಡಚಬಹುದಾದ ಕನ್ನಡಿಯಿಂದ ಜನಸಂದಣಿಯ ಜಾಗದಲ್ಲಿ ಪಾರ್ಕಿಂಗ್ ರೈಡಿಂಗ್‌ ಮಾಡಲು ಅತಿ ಸುಲಭ

TVS JupiterRetractable Bag Hooks Dual bag hooks

ರಿಟ್ರ್ಯಾಕ್ಟೇಬಲ್ ಬ್ಯಾಗ್ ಹುಕ್ಸ್

TVS Jupiterನ ರಿಟ್ರ್ಯಾಕ್ಟೇಬಲ್ ಬ್ಯಾಗ್ ಹುಕ್ ನಿಮ್ಮ ಕಾಲುಗಳಿಗೆ ಯಾವಾಗಲೂ ಗಾಯ ಮಾಡುವುದಿಲ್ಲ. ಇದನ್ನು ನಿಮಗೆ ಬ್ಯಾಗ್ ಇಡಬೇಕಾಗಿದ್ದಾಗಲೇ ಹೊರ ತೆಗೆಯಿರಿ. ಇದು ನಿಮಗೆ ಸಾಮಾನು ಇಡಲು ಹೆಚ್ಚು ಜಾಗ ಒದಗಿಸುತ್ತದೆ.

TVS Jupiter External Fule Fill

ಬಾಹ್ಯ ಇಂಧನ ತುಂಬುವಿಕೆ

Jupiterನ ಎಕ್ಸಟರ್ನಲ್ ಫ್ಯುಯಲ್ ಫಿಲ್ ಸಹಾಯದಿಂದ ನೀವು ನಿಮ್ಮ ಸೀಟ್‌ನಿಂದ ಏಳದೇ ಆರಾಮವಾಗಿ ಪೆಟ್ರೊಲ್ ತುಂಬಿಸಬಹುದಾಗಿದೆ. ನೀವು ನಿಮ್ಮ ಸೀಟಿನ ಕೆಳಗೆ ಯಾವುದೇ ಬೆಲೆ ಬಾಳುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿದ್ದಲ್ಲಿ ಇದು ಮತ್ತಷ್ಟು ಸುರಕ್ಷಿತವಾಗಿರುತ್ತದೆ. ಇದರಿಂದಾಗಿ ಸೀಟಿನ ಕೆಳಗಡೆ ಇಟ್ಟ ನಿಮ್ಮ ತಿಂಡಿ ತಿನಿಸುಗಳು ಕೂಡ ಪೆಟ್ರೊಲ್ ಸಿಡಿಯುವುದು ಅಥವಾ ಅದರ ವಾಸನೆಯಿಂದ ಸುರಕ್ಷಿತವಾಗಿರುವುದು.

TVS Jupiter ZX Centre Stand

ಪೇಟೆಂಟ್‌ ಮಾಡಿದ E-Z® ಸೆಂಟರ್‌ ಸ್ಟಾಂಡ್‌

TVS Jupiterನ ಪೆಟೆಂಟೆಡ್ E-Z® ಸೆಂಟರ್ ಸ್ಟ್ಯಾಂಡ್ ನಿಮಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಕೂಡ ಸುಲಭವಾಗಿ ಸ್ವಲ್ಪ ಸರಿಸಿ, ಸೆಂಟರ್ ಸ್ಟ್ಯಾಂಡ್ ಮೇಲೆ ಸ್ಕೂಟರ್ ಪಾರ್ಕ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ.

TVS Jupiter spedometer

ಲೋ ಫ್ಯುಯಲ್ ಇಂಡಿಕೆಟರ್

ಫ್ಯುಯಲ್ ಸಮಯಕ್ಕೆ ಸರಿಯಾಗಿ ನಿಮ್ಮ ಅನುಕೂಲದಂತೆ ತುಂಬಿಸಿರಿ. ಒಂದು ವೇಳೆ ನಿಮ್ಮ ಸ್ಕೂಟರ್‌ನಲ್ಲಿ ಫ್ಯುಯಲ್ ಕಡಿಮೆಯಾದಾಗ, ಇದರ ಲೋ ಫ್ಯುಯಲ್ ಇಂಡಿಕೇಟರ್ ನಿಮಗೆ ಫ್ಯುಯಲ್ ತುಂಬಿಸುವುದನ್ನು ನೆನಪಿಸುತ್ತದೆ. ಈ ಸ್ಮಾರ್ಟ್ ಅಲರ್ಟ್ ಸಿಸ್ಟೆಮ್‌ನಿಂದ ನಿಮಗೆ ಫ್ಯುಯಲ್ ತುಂಬಿಸುವಂತ ಸಣ್ಣ ಪುಟ್ಟ ಚಿಂತೆಯ ಅವಶ್ಯಕತೆ ಇರುವುದಿಲ್ಲ.

TVS Jupiter Front Utility Box

ಫ್ರಂಟ್ ಯುಟಿಲಿಟಿ ಬಾಕ್ಸ್

2 ಲೀಟರ್ ನ ಫ್ರಂಟ್ ಯುಟಿಲಿಟಿ ಬಾಕ್ಸ್ ಹೆಚ್ಚು ಸ್ಟೊರೇಜ್ ಸ್ಥಳ ಮತ್ತು ಅನುಕೂಲತೆ ಒದಗಿಸುತ್ತದೆ.

TVS Jupiter Malfunction Indicator Lamps

ಮಾಲ್ ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ (ಎಮ್‌ಐಎಲ್)

ಮಾಲ್‌ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ ನಿಮಗೆ ವಾಹನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ಅಲರ್ಟ ಮಾಡುತ್ತದೆ ಮತ್ತು ನಿಮ್ಮ ವಾಹನದ ಪ್ರದರ್ಶನ ಸರ್ವಶ್ರೇಷ್ಟವಾಗಿರುವುದನ್ನು ಹಾಗೂ ಅದರ ಉಸ್ತುವಾರಿ ಖರ್ಚು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.

TVS Jupiter Metal Body

ಮೆಟಲ್ ಬಾಡಿ

"ನರನಾಡಿಗಳು ಗಟ್ಟಿಯಾಗಿದ್ದಲ್ಲಿ, ಮಾತ್ರ ಸಿಗುತ್ತದೆ ಗಟ್ಟಿತನ ಮತ್ತು ನಮ್ಯತೆ. ಈ ಗಾಡಿಯ ಗಟ್ಟಿಮುಟ್ಟಾದ ಚೆಸ್ಸಿಸ್ ಸಕ್ರೀಯ ಸಂಚಲನೆಗಾಗಿ ಒಂದು ಗಟ್ಟಿ ಆಧಾರ ಒದಗಿಸುತ್ತದೆ ಮತ್ತು ಇದರ ಅಲ್ಟ್ರಾ ಸ್ಟ್ರೆಂಗ್ತ್ ಶೀಟ್ ಮೆಟಲ್ ಬಾಡಿ, ಟೆನ್ಶನ್ ನ ಯಾವುದೇ ಸಂಭಾವನೆ ಇರದಂತೆ ಮಾಡುತ್ತದೆ. "

TVS Jupiter LED Head Lamp

LED ಹೆಡ್ ಲ್ಯಾಂಪ್

LED ಹೆಡ್ ಲ್ಯಾಂಪ್ ನಿಮಗೆ ಕೊಡುತ್ತದೆ ಒಳ್ಳೆಯ ಬೆಳಕು. ಇದರಿಂದ ನಿಮಗೆ ದೊರೆಯುವುದು ಉತ್ತಮ ವಿಜಿಬಿಲಿಟಿ ಮತ್ತು ಅಧಿಕ ಸುರಕ್ಷತೆ. ಇದು ನೋಡಲು ಸ್ಟೈಲಿಶ್ ಕೂಡ ಆಗಿದೆ.

TVS Jupiter Parking Brake

ಪಾರ್ಕಿಂಗ್ ಬ್ರೇಕ್

ನಿಮ್ಮ Jupiterಅನ್ನು ಅಸಮಾನ ಮತ್ತು ಇಳಿಜಾರಾದ ಮೇಲ್ಭಾಗದಲ್ಲಿ ಕೂಡ ಚಿಂತೆಯಿಲ್ಲದೆ ಪಾರ್ಕ್ ಮಾಡಿ. Jupiter ನ ಪಾರ್ಕಿಂಗ್ ಬ್ರೇಕ್ ಕಾರಿನ ಹ್ಯಾಂಡ್ ಬ್ರೇಕ್ ಹಾಗೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ಗಾಡಿಯನ್ನು ಅದರ ಜಾಗದಲ್ಲಿ ಸ್ಥಿರವಾಗಿ ಇಡುತ್ತದೆ.

360 ಡಿಗ್ರಿ ನೋಟ ನೋಡಲು ಕ್ಲಿಕ್ ಮತ್ತು ಡ್ರ್ಯಾಗ್ ಮಾಡಿ
ಮ್ಯಾಟ್ ಬ್ಲ್ಯೂ

Any images or features displayed on creatives are subject to change without prior notice

ಟೆಕ್‌ ಸ್ಪೆಕ್

  • ಟೈಪ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, CVTi, ಫ್ಯುಯಲ್ ಇಂಜೆಕ್ಷನ್
  • ಬೋರ್ x ಸ್ಟ್ರೋಕ್ 53.5 x 48.8 mm
  • ಡಿಸ್ ಪ್ಲೇಸ್ ಮೆಂಟ್ 109.7 cc
  • ಗರಿಷ್ಟ ಪವರ್ 5.8 kW @ 7500 rpm
  • ಗರಿಷ್ಟ ಟಾರ್ಕ್ 8.8 Nm @ 5500 rpm
  • ಏರ್ ಫಿಲ್ಟರ್ ಟೈಪ್ ವಿಸ್ಕಸ್ ಪೇಪರ್ ಫಿಲ್ಟರ್
  • ಟ್ರಾನ್ಸ್ ಮಿಶನ್ ಟೈಪ್ CVT ಆಟೋಮ್ಯಾಟಿಕ್
  • ಸ್ಟಾರ್ಟಿಂಗ್ ಸಿಸ್ಟಮ್ ಕಿಕ್ ಮತ್ತು ಮತ್ತು ಇಲೆಕ್ಟ್ರಿಕ್ ಸ್ಟಾರ್ಟರ್
  • ಟೈಯರ್ ಸೈಜ್ (ಮುಂದೆ ಮತ್ತು ಹಿಂದೆ) 90/90-12 54J (ಟ್ಯೂಬ್ ಲೆಸ್)
  • ಮುಂದೆ 220 mm ಡಿಸ್ಕ್ (SBT)
  • ಹಿಂದೆ 130 mm ಡ್ರಮ್ (SBT)
  • ಡೈಮೆನ್ಷನ್ - (ಉದ್ದ x ಅಗಲ x ಎತ್ತರ) 1834 x 678 x 1286 mm
  • ಫ್ರೇಮ್ ಹೈ ರಿಜಿಡಿಟಿ ಅಂಡರ್ ಬೋನ್ ಟೈಪ್ 
  • ಮುಂದಿನ ಸಸ್ಪೆನ್ಷನ್ ಟೆಲಿಸ್ಕೋಪಿಕ್ ಹೈಡ್ರಾಲಿಕ್
  • ಗ್ರೌಂಡ್ ಕ್ಲಿಯರೆನ್ಸ್ 163 mm (ಅನ್ ಲೆಡನ್)
  • ಕರ್ಬ್ ನ ಭಾರ 109 kg
  • ಹಿಂದಿನ ಸಸ್ಪೆನ್ಷನ್ 3 ಸ್ಟೆಪ್ ಅಡ್ಜಸ್ಟೆಬಲ್ ಟೈಪ್ ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಡ್ಯಾಂಪರ್ ನೊಂದಿಗೆ
  • ವ್ಹೀಲ್ ಬೇಸ್ 1275 mm
  • ಚಕ್ರಗಳು ಅಲಾಯ್
  • ಇಗ್ನಿಶನ್ ECU ಕಂಟ್ರೋಲ್ಡ್ ಇಗ್ನಿಶನ್
  • ಬ್ಯಾಟರಿ 12V, 4Ah MF ಬ್ಯಾಟರಿ
  • ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ LED

YOU MAY ALSO LIKE

TVS Ntorq
TVS Scooty Pep+
TVS iQube